ಹಡಗಿನಿಂದ ಡಾಂಬರ್ ಇಳಿಸುವ ವೇಳೆ ಪೈಪ್ ಸಿಡಿದ ಪರಿಣಾಮ ಈ ಅವಘಡ ಸಂಭವಿಸಿದೆ. ಮಧ್ಯಪ್ರಾಚ್ಯ ದೇಶದಿಂದ ಮರಿನ್ ಫ್ಲೂಯಲ್ ಹಡಗು ಕಾರವಾರ ಬಂದರಿಗೆ ಡಾಂಬರ್ ಹೊತ್ತು ತಂದಿತ್ತು. ಈ ಡಾಂಬರ್ ಅಲಿಗದ್ದಾದ ಎಂ.ಎ.ಸಿ.ಎಲ್ ಕಂಪನಿಗೆ ಸೇರಿದ್ದು, ಬೈತಕೋಲ್ ಬಂದರಿನಲ್ಲಿ ಅನ್‌ಲೋಡ್ ಮಾಡಲಾಗುತ್ತಿತ್ತು. ಡಾಂಬರ್ ಇಳಿಸುವ ವೇಳೆ ಪೈಪ್‌ನಲ್ಲಿ ಏಕಾಏಕಿ ಒತ್ತಡ ಹೆಚ್ಚಾಗಿದೆ. ಇದರಿಂದ ಪೈಪ್ ಸಿಡಿದು, ಬಿಸಿ ಡಾಂಬರ್ ನೇರವಾಗಿ ಸಮುದ್ರಕ್ಕೆ ಹರಿದಿದೆ. ಕ್ಷಣಾರ್ಧದಲ್ಲೇ ಸಾವಿರಾರು ಲೀಟರ್ ಡಾಂಬರ್ ಸಮುದ್ರ ಸೇರಿರುವುದಾಗಿ ತಿಳಿದುಬಂದಿದೆ ಘಟನೆ ನಡೆದ ತಕ್ಷಣ ಹಡಗಿನ ಸಿಬ್ಬಂದಿ ಸೋರಿಕೆ ತಡೆಯಲು ಕಾರ್ಯಾಚರಣೆ ಆರಂಭಿಸಿದರು. ಹಲವು ಗಂಟೆಗಳ ಪ್ರಯತ್ನದ ಬಳಿಕ ಪೈಪ್ ದುರಸ್ತಿ ಮಾಡಿ ಸೋರಿಕೆಯನ್ನು ನಿಯಂತ್ರಣಕ್ಕೆ ತರಲಾಗಿದೆ.
ಕಾರವಾರ ಬಂದರಿನಲ್ಲಿ ಹಡಗಿನಿಂದ ಸಾವಿರಾರು ಲೀಟರ್ ಬಿಸಿ ಡಾಂಬರ್ ಸಮುದ್ರಕ್ಕೆ ಸೋರಿಕೆ ಕಾರವಾರ
Kaverinews
|
Published on:
|
Views: 34
ರಾಜ್ಯ