ಭಾನುವಾರ, ಜುಲೈ 5, 2026
admin_panel_settings settings
share

Kaveri News Logo E-News

Kannada & English Editorial Portal

Kaveri News Logo

ಭಾರತದ ಮೊದಲ ಬುಲೆಟ್ ರೈಲು ಯಾವಾಗ ಕಾರ್ಯ ಆರಂಭಿಸುತ್ತೆ?

Kaverinews | Published on: | Views: 48
ರಾಷ್ಟ್ರೀಯ
ಭಾರತದ ಮೊದಲ ಬುಲೆಟ್ ರೈಲು ಯಾವಾಗ ಕಾರ್ಯ ಆರಂಭಿಸುತ್ತೆ?
ಟೈಮ್‌ಲೈನ್‌ ಹಂಚಿಕೊಂಡ ಅಶ್ವಿನಿ ವೈಷ್ಣವ್ ಹೈದರಾಬಾದ್‌: ಶೀಘ್ರದಲ್ಲೇ ಭಾರತದಲ್ಲಿ ಬುಲೆಟ್‌ ರೈಲುಗಳ ಸಂಚಾರ ಆರಂಭವಾಗಲಿದೆ. ಮುಂಬೈ – ಅಹಮದಾಬಾದ್‌ ನಡುವಿನ ಮೊದಲ ಬುಲೆಟ್‌ ರೈಲಿನ (Bullet Train) ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಶನಿವಾರ ಘೋಷಿಸಿದ್ದಾರೆ.

ಬುಲೆಟ್ ರೈಲಿನ ಮೊದಲ ವಿಭಾಗವು ಮುಂದಿನ ವರ್ಷ ಕಾರ್ಯಾರಂಭ ಮಾಡಲಿದೆ. 508 ಕಿ.ಮೀ ಉದ್ದದ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್ (Mumbai-Ahmedabad High-Speed Rail (MAHSR) corridor) ಅನ್ನು ಒಂದೇ ಬಾರಿಗೆ ತೆರೆಯುವ ಬದಲು ಹಂತ-ಹಂತವಾಗಿ ತೆರೆಯಲಾಗುವುದು. ಸೂರತ್-ಬಿಲಿಮೋರಾ ವಿಭಾಗವನ್ನ ಪ್ರಾರಂಭಿಸಿದ ನಂತರ, ಉಳಿದ ಮಾರ್ಗಗಳನ್ನ ಆರಂಭಿಸಲಾಗುತ್ತದೆ. ಮುಂದಿನ ವರ್ಷ ಸೂರತ್‌ ಮತ್ತು ಬಿಲಿಮೋರಾ ನಡುವಿನ ಬುಲೆಟ್ ರೈಲಿನ ಮೊದಲ ವಿಭಾಗವನ್ನ ಆರಂಭಿಸಲಿದ್ದೇವೆ. ಅದರ ನಂತರ ವಾಪಿಯಿಂದ ಸೂರತ್, ನಂತರ ವಾಪಿಯಿಂದ ಅಹಮದಾಬಾದ್, ಅಹಮದಾಬಾದ್ ನಿಂದ ಥಾಣೆ ಮತ್ತು ಅಹಮದಾಬಾದ್ ನಿಂದ ಮುಂಬೈಗೆ ಮಾರ್ಗಗಳನ್ನ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದಾರೆ. ರೈಲ್ವೆ ಸಚಿವಾಲಯವು ಅಶ್ವಿನಿ ಅವರ ಹೇಳಿಕೆಯ ವೀಡಿಯೊವನ್ನ ಜಾಲತಾಣದಲ್ಲಿ ಹಂಚಿಕೊಂಡಿದೆ.

Share this article