ಕುಶಾಲನಗರ,
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊರುವ ಅವಕಾಶವನ್ನು ದುಬಾರೆ ಶಿಬಿರದ ಧನಂಜಯ (46)ಅಥವಾ ಪ್ರಶಾಂತ್ (54) ಗೆ ನೀಡುವ ಸಾಧ್ಯತೆ ಅಧಿಕವಾಗಿದೆ.
ಕಳೆದ ಆರು ವರ್ಷಗಳಿಂದ ದಸರಾ ಉತ್ಸವದಲ್ಲಿ ಅಂಬಾರಿ ಹೊತ್ತ ಗಜಪಡೆ ಮುನ್ನಡೆಸಿದ್ದ ಕ್ಯಾಪ್ಟನ್ ಅಭಿಮನ್ಯು (61) ಈಗ ಸೀನಿಯರ್ ಎಲಿಫೆಂಟ್ ಗೌರವ ಸಂದಿರುವ ಕಾರಣ ಸುಪ್ರೀಂಕೋರ್ಟ್ ನಿರ್ದೇಶನದಂತೆ 60 ವರ್ಷ ಮೀರಿದ ಆನೆಗಳನ್ನು ಕಠಿಣ ಕೆಲಸಗಳಿಗೆ ಬಳಕೆ ಮಾಡುವುದು ಭಾರ ಹೊರಿಸುವಂತಿಲ್ಲ.
ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಭಿಮನ್ಯುವನ್ನು ದಸರಾ ಆನೆಗಳ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ.
ಈ ಹಿನ್ನಲೆಯಲ್ಲಿ ಈ ಬಾರಿಯ ಅಂಬಾರಿ ಆನೆಯಾಗಿ ಧನಂಜಯ ಅಥವಾ ಪ್ರಶಾಂತ ಆನೆಗಳ ಹೆಸರು ಚಾಲ್ತಿಯಲ್ಲಿದೆ.
ಜೊತೆಗೆ ಬಳ್ಳೆ ನಾಗರಹೊಳೆಯ ಆನೆ ಶಿಬಿರದ ಮಹೇಂದ್ರ (42) ಹೆಸರು ಕೂಡ ಲಿಸ್ಟಿನಲ್ಲಿದೆ.
ಇವುಗಳಲ್ಲಿ ಒಂದಕ್ಕೆ ಅಂಬಾರಿ ಪಟ್ಟ ಕಟ್ಟುವ ಸಿದ್ಧತೆಯಲ್ಲಿ ಚರ್ಚೆ ನಡೆಯುತ್ತಿದೆ.
ಧನಂಜಯ ಹಾಸನ ಎಸಳೂರು ಅರಣ್ಯದಿಂದ ಸೆರೆಹಿಡಿದು ದುಬಾರೆ ಶಿಬಿರಕ್ಕೆ ಸೇರ್ಪಡೆಗೊಂಡಿದ್ದು ದಸರಾದಲ್ಲಿ ಇದುವರೆಗೆ 7 ಬಾರಿ ಪಾಲ್ಗೊಂಡ ಹೆಗ್ಗಳಿಕೆ ಇದೆ.
ಮಾವುತ ಜೆ ಸಿ ಭಾಸ್ಕರ ಕಾವಾಡಿಗ ಜೆ ಎಸ್ ರಾಜಣ್ಣ ಧನಂಜಯ ಆನೆಯನ್ನು ಆರೈಕೆ ಮಾಡುತ್ತಿದ್ದಾರೆ.
ಪ್ರಶಾಂತ್ 1993ರಲ್ಲಿ ಕಾರ್ಯಕರ್ತೆ ಅರಣ್ಯದಿಂದ ಸೆರೆಹಿಡಿದು ದುಬಾರೆ ಶಿಬಿರ ಸೇರ್ಪಡೆಗೊಂಡಿದ್ದು ಮೈಸೂರು ದಸರಾದಲ್ಲಿ 16 ಬಾರಿ ಪಾಲ್ಗೊಂಡ ಅನುಭವ ಇದೆ. ಮಾವುತ ಜೆ ಚಿನ್ನಪ್ಪ ಕಾವಡಿಗ ಚಂದ್ರ ಅವರು ಪ್ರಶಾಂತ್ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.